ಶ್ರೀದತ್ತ ವೇಂಕಟೇಶ್ವರ ಕ್ಷೇತ್ರ

ವೇಂಕಟೇಶಃ ಪರೋದೇವೋ ದತ್ತಾತ್ರೇಯಃ ಪರೋ ಗುರುಃ।
ದ್ವಯೋ ರಭಿನ್ನಯೋ ಶ್ಶಕ್ತ್ಯಾ ಜಗತಾಮಸ್ತು ಮಂಗಳಮ್।।

 
ಮೈಸೂರಿನ ಅತ್ಯುತ್ತಮವಾದ ಧಾರ್ಮಿಕ ಕ್ಷೇತ್ರಗಳಲ್ಲಿ, ಪ್ರಸಿದ್ಧವಾದ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ಈಶಾನ್ಯ ಭಾಗದಲ್ಲಿ ನೆಲೆಸಿದ ಶ್ರೀದತ್ತ ವೇಂಕಟೇಶ್ವರ ಕ್ಷೇತ್ರ ತುಂಬ ಕಾರಣಿಕವಾದ ದಿವ್ಯಸ್ಥಳ. ತಿರುಮಲ ತಿರುಪತಿ ಬೆಟ್ಟದಲ್ಲಿ ಇರುವಂತೆ, ಶ್ರೀನಿವಾಸನ ಪ್ರೇರಣೆಯಿಂದ ಅವಧೂತ ದತ್ತ ಪೀಠಾಧಿಪತಿ ಜಗದ್ಗುರು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಂದ ಪ್ರತಿಷ್ಠಾಪನೆಗೊಂಡ, ಈ ದೇವಾಲಯ ಬಹಳ ರಮಣೀಯವಾಗಿದೆ.

ಶ್ರೀದತ್ತ ವೇಂಕಟೇಶ್ವರ ಸ್ವಾಮಿಯ ಭವ್ಯ ಮೂರ್ತಿಯ ಸನ್ನಿಧಿಯಲ್ಲಿ, ಪದ್ಮಾವತೀ ದೇವಿ, ಧನ್ವಂತರಿ, ಸಿದ್ಧಿವಿನಾಯಕ, ಸರ್ವದೋಷಹರ ಶಿವಾಲಯ, ಮರಕತ ಸುಬ್ರಹ್ಮಣ್ಯ, ಬಯಲು ಆಂಜನೇಯ, ನವಗ್ರಹ ದೇವಾಲಯಗಳ ಸ್ಥಾಪನೆಯಾಗಿದೆ. ಪ್ರತಿ ಶನಿವಾರ ಸಾವಿರಾರು ಮಂದಿ ಮೈಸೂರು ಮತ್ತು ಹೊರಗಿನ ಭಕ್ತಾದಿಗಳು ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ.

ಶ್ರಾವಣ ಶನಿವಾರಗಳು, ಯುಗಾದಿ, ವೈಕುಂಠ ಏಕಾದಶಿ, ಶ್ರವಣ ನಕ್ಷತ್ರ, ವಾರ್ಷಿಕ ಬ್ರಹ್ಮೋತ್ಸವಗಳಲ್ಲಿ ಸ್ವಾಮಿಯ ದರ್ಶನವನ್ನು ಮಾಡಿ, ತಮ್ಮ ಕಾಣಿಕೆಯನ್ನು ಸಲ್ಲಿಸಿ, ಕಲ್ಯಾಣೋತ್ಸವ ವನ್ನು ಮಾಡಿಸುತ್ತಾರೆ. ಹಲವಾರು ಜನರಿಗೆ ಶ್ರೀನಿವಾಸನ ಅನುಗ್ರಹವು ಲಭಿಸಲೆಂದು, ಶ್ರೀಕ್ಷೇತ್ರದಲ್ಲಿ ಮೂಲಮೂರ್ತಿಯ ಕೈಂಕರ್ಯ, ಸತ್ಯನಾರಾಯಣ ವ್ರತ, ಹವನ, ತುಲಾಭಾರ, ಮುಡಿಯ ಸಮರ್ಪಣೆ, ಕಾವಡಿ ಉತ್ಸವ, ಶಾಂತಿ ಕಾರ್ಯಕ್ರಮ ಗಳು ಮಾಡಿಸಲು ವ್ಯವಸ್ಥೆ ಮಾಡಲಾಗಿದೆ.

ಭಕ್ತಾದಿಗಳು ಸ್ವಾಮಿಯನ್ನು ಸಂದರ್ಶಿಸಿ, ಧನ್ಯರಾಗಬಹುದು. ಶ್ರೀದತ್ತಾತ್ರೇಯರ ಸನ್ನಿಧಾನದಲ್ಲಿ ನೆಲೆಸಿರುವ ಶ್ರೀವೇಂಕಟೇಶ್ವರ ಸ್ವಾಮಿ ಸಾವಿರಾರುಮಂದಿ ಭಕ್ತರ ಮನೆ ದೇವರಾಗಿ, ಅನುಗ್ರಹಿಸುತ್ತಿದ್ದಾರೆ.

ಶ್ರಿಯಃ ಕಾನ್ತಾಯ ಕಲ್ಯಾಣ ನಿಧಯೇ ನಿಧಯೇರ್ಥಿನಾಮ್।
ಶ್ರೀವೇಂಕಟ ನಿವಾಸಾಯ ಶ್ರೀನಿವಾಸಾಯ ಮಂಗಳಮ್
ವಿಳಾಸ - ಶ್ರೀಗಣಪತಿ ಸಚ್ಚಿದಾನಂದ ಆಶ್ರಮ, ದತ್ತ ನಗರ, ನಂಜನಗೂಡು ರಸ್ತೆ, ಮೈಸೂರು 570025
ದೂರವಾಣಿ 0821 2483200 ಈಮೆಯಿಲ್  This email address is being protected from spambots. You need JavaScript enabled to view it.